ವಾಟ್ಸ್ ಆಪ್ ನಲ್ಲಿ ವಿದ್ಯುತ್ ಬಿಲ್ ಪಡೆಯುವುದು ಹೇಗೆ?
ವಾಟ್ಸ್ ಆಪ್ ನಲ್ಲಿ ವಿದ್ಯುತ್ ಬಿಲ್ ಪಡೆಯುವುದು ಹೇಗೆ?

ದೆಹಲಿ ವಿದ್ಯುತ್ ವಿತರಣಾ ಸಂಸ್ಥೆ (ಡಿಸ್ಕಾಂ)BSES ವಾಟ್ಸ್ ಆಪ್ ನಲ್ಲಿ ಬಳಕೆದಾರರು ತಮ್ಮ ವಿದ್ಯುತ್ ಬಿಲ್ ನ ಡುಪ್ಲಿಕೇಟ್ ಕಾಪಿಯನ್ನು ಪಡೆದುಕೊಳ್ಳಬಹುದಾದ ಹೊಸ ಸೇವೆಯನ್ನು ಆರಂಭಿಸಿದ್ದಾರೆ. ಈ ಮೂಲಕ ಮೊದಲ ಬಾರಿಗೆ ವಿದ್ಯುತ್ ವಿತರಣಾ ಸಂಸ್ಥೆಯೊಂದು ವಾಟ್ಸ್ ಆಪ್ ಸೇವೆಯನ್ನು ಗ್ರಾಹಕರಿಗಾಗಿ ಅಳವಡಸಿಕೊಂಡಂತಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

ವಾಟ್ಸ್ ಆಪ್ ನಲ್ಲಿ ಡಿಸ್ಕಾಂ ಬಿಲ್:

ಡಿಸ್ಕಾಂ ಅಧಿಕಾರಿಗಳು ತಿಳಿಸುವಂತೆ ಈಗಾಗಲೇ ಗ್ರಾಹಕರು BSES ವೆಬ್ ಸೈಟ್ ಮತ್ತು ಮೊಬೈಲ್ ಆಪ್ ಗಳ ಮೂಲಕ ಬಿಲ್ ಪಡೆದುಕೊಳ್ಳಬಹುದಾಗಿತ್ತು. ಹೊಸ ಸೇರ್ಪಡೆ ಎಂಬಂತೆ ಇದೀಗ ವಾಟ್ಸ್ ಆಪ್ ಮೂಲಕವೂ ಕೂಡ ಗ್ರಾಹಕರಿಗೆ ತಮ್ಮ ವಿದ್ಯುತ್ ಬಿಲ್ ಪಡೆದುಕೊಳ್ಳಬಹುದಾದ ಅವಕಾಶವನ್ನು ಕಲ್ಪಿಸಿಕೊಡಲಾಗುತ್ತಿದೆ. ಆ ಮೂಲಕ ಡಿಜಿಟೈಸೇಷನ್ ಗೆ ಹೆಚ್ಚಿನ ಒತ್ತು ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ.

ಹೇಗೆ ಬಿಲ್ ಪಡೆಯುವುದು?

ಡುಪ್ಲಿಕೇಟ್ ಬಿಲ್ ಪಡೆದುಕೊಳ್ಳುವುದಕ್ಕಾಗಿ ಗ್ರಾಹಕರು ತಮ್ಮ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ BSES ವಾಟ್ಸ್ ಆಪ್ ನಂಬರ್ ನ್ನು ಸೇವ್ ಮಾಡಿಕೊಳ್ಳಬೇಕು ಮತ್ತು #Bill9-digit CA (ಗ್ರಾಹಕರ ಅಕೌಂಟ್ ನಂಬರ್)ನ್ನು ಟೈಪ್ ಮಾಡಿ 9999919123 ಗೆ ಕಳುಹಿಸಿಕೊಡಬೇಕು. ನಂತರ ನಿಮಗೆ ಡುಪ್ಲಿಕೇಟ್ ಬಿಲ್ ನ್ನು ವಾಟ್ಸ್ ಆಪ್ ನಲ್ಲಿ ಕಳುಹಿಸಿಕೊಡಲಾಗುತ್ತದೆ.

ಯಾರಿಗೆ ಮೊದಲು ಯಾರಿಗೆ ನಂತರ?

ದಕ್ಷಿಣ ಮತ್ತು ಪಶ್ಚಿಮ ದೆಹಲಿ ಗ್ರಾಹಕರಿಗೆ ಈ ಸೇವೆ ಪ್ರಾರಂಭದಲ್ಲಿ ಲಭ್ಯವಾಗುತ್ತದೆ ನಂತರದ ದಿನಗಳಲ್ಲಿ ಪೂರ್ವ ಮತ್ತು ಮಧ್ಯ ದೆಹಲಿಯ ಎಲ್ಲಾ ಗ್ರಾಹಕರು ಈ ಸೇವೆಯನ್ನು ಪಡೆದುಕೊಳ್ಳಲಿದ್ದಾರೆ ಎಂದು ಡೆಸ್ಕಾ ತಿಳಿಸಿದೆ.

ತಡೆರಹಿತ ಸೇವೆ:

ತಡೆರಹಿತ ಸೇವೆಯನ್ನು ನೀಡುವ ಉದ್ದೇಶದಿಂದಾಗಿ ವಾಟ್ಸ್ ಆಪ್ ಸೇವೆಯನ್ನು ಒದಗಿಸಲಾಗಿದ್ದು BSES ಈ ಫ್ಲ್ಯಾಟ್ ಫಾರ್ಮ್ ನ್ನು ಬ್ಯಾಕ್ ಎಂಡ್ ಸ್ಯಾಪ್ ಮತ್ತು IOMS ಫ್ಲ್ಯಾಟ್ ಫಾರ್ಮ್ ಜೊತೆಗೆ ಇಂಟಿಗ್ರೇಟ್ ಮಾಡಿಕೊಳ್ಳಲಾಗಿದೆ.

ನೋ ಸಪ್ಲೈ ದೂರು:

ಡಿಸ್ಕಾಂ ಈ ಮೊದಲು ನೋ ಸಪ್ಲೈ ದೂರು ದಾಖಲಿಸುವ ಫೆಸಿಲಿಟಿಯನ್ನು ಒದಗಿಸಿಕೊಟ್ಟಿತ್ತು ಮತ್ತು ವಾಟ್ಸ್ ಆಪ್ ನಲ್ಲಿ ವಿದ್ಯುತ್ ಕದಿಯುವಿಕೆಯ ಬಗ್ಗೆ ದೂರು ನೀಡುವುದಕ್ಕೆ ಅನುಕೂಲ ಮಾಡಿಕೊಟ್ಟಿತ್ತು.

ಸುಲಭ ಪಾವತಿ:

ಡಿಸ್ಕಾಂ ಸೇವೆಯನ್ನು ಇನ್ನಷ್ಟು ಸುಲಭ ರೀತಿಯಲ್ಲಿ ಬಳಸಿಕೊಳ್ಳುವುದಕ್ಕೆ ಈ ವಾಟ್ಸ್ ಆಪ್ ಸೇವೆಯು ಅನುಕೂಲಕರವಾಗಿರುತ್ತದೆ ಎಂದು ಕಂಪೆನಿಯು ವಕ್ತಾರರು ತಿಳಿಸಿದ್ದಾರೆ. ಡಿಜಿಟಲ್ ಪಾವತಿಯನ್ನು ಹೆಚ್ಚಿಸುವುದು ಮತ್ತು

ಕ್ಯಾಷ್ ಲೆಸ್ ವ್ಯವಹಾರಕ್ಕೆ ಅನುಕೂಲ:

ಹಲವಾರು ವ್ಯಾಲೆಟ್ ಕಂಪೆನಿಗಳ ಜೊತೆಗೆ ಕೈಜೋಡಿಸಲಾಗಿದ್ದು ಕ್ಯಾಷ್ ಬ್ಯಾಕ್ ಸೇವೆಗಳು ಸೇರಿದಂತೆ ಹಲವು ಅವಕಾಶಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದ್ದು ಸಮಯಕ್ಕೆ ಸರಿಯಾಗಿ ಪಾವತಿ ಕೆಲಸಗಳು ನಡೆಯುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸದ್ಯ ಡಿಸ್ಕಾಂ ನಲ್ಲಿ 90% ಪಾವತಿಗಳು ಕ್ಯಾಷ್ ಲೆಸ್ ಆಗಿಯೇ ನಡೆಯುತ್ತಿದೆ ಎಂಬುದು ಖುಷಿಯ ವಿಚಾರ ಎಂದು ಅವರು ತಿಳಿಸಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ
To stay updated with latest technology news & gadget reviews, follow GizBot on Twitter, Facebook, YouTube and also subscribe to our notification.
Allow Notifications
You have already subscribed

Let’s block ads! (Why?)

Facebook Comments
Close Menu