ಐಫೋನ್ ನಲ್ಲಿ ಫ್ಲ್ಯಾಶ್ ಲೈಟ್ ಬ್ರೈಟ್ ನೆಸ್ ಅಡ್ಜೆಸ್ಟ್ ಮಾಡುವುದು ಹೇಗೆ?
ಐಫೋನ್ ನಲ್ಲಿ ಫ್ಲ್ಯಾಶ್ ಲೈಟ್ ಬ್ರೈಟ್ ನೆಸ್ ಅಡ್ಜೆಸ್ಟ್ ಮಾಡುವುದು ಹೇಗೆ?

ನಿಮ್ಮ ಸುತ್ತಲಿನ ಪ್ರದೇಶದಲ್ಲಿ ಬೆಳಕು ಕಡಿಮೆ ಇದ್ದಾಗ ಅದೆಷ್ಟು ಬಾರಿ ನೀವು ನಿಮ್ಮ ಸ್ಮಾರ್ಟ್ ಫೋನಿನ ಫ್ಲ್ಯಾಶ್ ಲೈಟ್ ನ್ನು ಆನ್ ಮಾಡುವುದು ಮತ್ತು ಆ ಬೆಳಕು ಸಾಕಾಗುತ್ತಿಲ್ಲ ಎಂದು ಭಾವಿಸುವುದು ನಡೆದಿಲ್ಲ ಹೇಳಿ. ಫ್ಲ್ಯಾಶ್ ಲೈಟ್ ಇನ್ನೂ ಇರಬೇಕಿತ್ತು ಎಂಬ ಕಾರಣಕ್ಕೆ ಕೆಲವರು ತಮ್ಮ ಸ್ಮಾರ್ಟ್ ಫೋನನ್ನೇ ಬದಲಿಸಿರಲೂಬಹುದು. ಫ್ಲ್ಯಾಶ್ ಲೈಟ್ ಹೆಚ್ಚಿಸುವುದಕ್ಕೆ ಯಾವುದಾದರೂ ಮಾರ್ಗವಿದ್ದಿದ್ದರೆ ಎಂದು ಆಲೋಚಿಸಿರಲೂಬಹುದು.

ಐಫೋನ್ ನಲ್ಲಿ ಫ್ಲ್ಯಾಶ್ ಲೈಟ್ ಬ್ರೈಟ್ ನೆಸ್ ಅಡ್ಜೆಸ್ಟ್ ಮಾಡುವುದು ಹೇಗೆ?

ಆಪಲ್ ಐಓಎಸ್ ನಲ್ಲಿ ಒಂದು ಉತ್ತರವಿದೆ. ಹಲವಾರು ಬಿಲ್ಟ್ ಇನ್ ಫೀಚರ್ ಗಳನ್ನು ಉದಾಹರಣೆಗೆ ರೆಕಾರ್ಡ್ ಸ್ಕ್ರೀನ್, ಮ್ಯೂಸಿಕ್ ಗೆ ಸ್ಲೀಮ್ ಟೈಮರ್ ಅಡ್ಜೆಸ್ಟ್ ಮೆಂಟ್ ಹೊಂದಿದಿರುವುದು ಇತ್ಯಾದಿಗಳಿಂದ ಐಓಎಸ್ ಆಪರೇಟಿಂಗ್ ಸಿಸ್ಟಮ್ ಯಾವಾಗಲೂ ಕೂಡ ಶ್ರೀಮಂತವೆನಿಸುತ್ತದೆ. ಕಂಟ್ರೋಲ್ ಸೆಂಟರ್ ನ ಸಹಾಯದಿಂದ ಐಓಎಸ್ ಬಳಕೆದಾರರಿಗೆ ಫ್ಲ್ಯಾಶ್ ಲೈಟ್ ಟಾಗಲ್ ಮಾಡಲು ಮಾತ್ರವೇ ಅವಕಾಶ ನೀಡುವುದಿಲ್ಲ ಬದಲಾಗಿ ಬ್ರೈಟ್ ನೆಸ್ ನ್ನು ಅಗತ್ಯಕ್ಕೆ ತಕ್ಕಂತೆ ಹೊಂದಿಸುವುದಕ್ಕೆ ಹಿಡನ್ ಫೀಚರ್ ನ್ನು ಕೂಡ ನೀಡುತ್ತದೆ.

ಫ್ಲ್ಯಾಶ್ ಲೈಟ್ ನ ಬ್ರೈಟ್ ನೆಸ್ ನ್ನು ಕಂಟ್ರೋಲ್ ಮಾಡುವುದು ಹೇಗೆ ಎಂಬ ಬಗ್ಗೆ ನೀವು ಆಲೋಚಿಸುತ್ತಿದ್ದರೆ ಇಲ್ಲಿದೆ ನೋಡಿ ಸಂಪೂರ್ಣ ವಿವರ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

ಅಗತ್ಯವಾಗಿರುವ ಅಂಶಗಳು:

– ಐಫೋನ್ 6ಎಸ್ ಮತ್ತು ಅದಕ್ಕಿಂತ ಮೇಲಿನ ವರ್ಷನ್ ನ ಜೊತೆಗೆ ಐಓಎಸ್ 11 ಮತ್ತು ಮೇಲಿನ ವರ್ಷನ್ ನ್ನು ಬಳಸುತ್ತಿದ್ದೀರಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.

– ನಾಲ್ಕು ಹಂತಗಳಲ್ಲಿ ಐಫೋನ್ ಬ್ರೈಟ್ ನೆಸ್ ಕಂಟ್ರೋಲ್ ನ್ನು ನೀಡುತ್ತದೆ. ಲೆವೆಲ್1, ಲೆವೆಲ್ 2, ಲೆವೆಲ್ 3 ಮತ್ತು ಲೆವೆಲ್ 4. ಲೆವೆಲ್ 1 ಕನಿಷ್ಠ ಬ್ರೈಟ್ ನೆಸ್ ನ್ನು ಮತ್ತು ಲೆವೆಲ್ 4 ಅತೀ ಹೆಚ್ಚು ಬ್ರೈಟ್ ನೆಸ್ ನ್ನು ಹೊಂದಿರುತ್ತದೆ.

ಫ್ಲ್ಯಾಶ್ ಲೈಟ್ ಬ್ರೈಟ್ ನೆಸ್ ನ್ನು ಕಂಟ್ರೋಲ್ ಮಾಡುವುದಕ್ಕೆ ಹಂತಗಳು:

ಐಫೋನ್ 8, ಐಫೋನ್ 8 ಪ್ಲಸ್, ಐಫೋನ್ 7, ಐಫೋನ್ 7 ಪ್ಲಸ್ ಮತ್ತು ಐಫೋನ್ 6ಎಸ್

1.ಐಫೋನ್ ನ್ನು ಅನ್ ಲಾಕ್ ಮಾಡಿ.

2.ಫೋನಿನ ಕಂಟ್ರೋಲ್ ಸೆಂಟರ್ ನ್ನು ಆಕ್ಸಿಸ್ ಮಾಡಲು ಸ್ಕ್ರೀನಿನ ಕೆಳಭಾಗದಿಂದ ಸ್ವೈಪ್ ಮಾಡಿ.

3.ಫ್ಲ್ಯಾಶ್ ಲೈಟ್ ನ್ನು ಟ್ಯಾಪ್ ಮಾಡಿ ಟಾಗಲ್ ಮಾಡಿ ಟರ್ನ್ ಆನ್ ಮಾಡಿ .

4.ಟಾಗಲ್ ನ್ನು ಲಾಂಗ್ ಪ್ರೆಸ್ ಮಾಡಿ. (ಫೋರ್ಸ್ ಟಚ್ ಅಥವಾ 3ಡಿ ಟಚ್)

5.ಇದೀಗ ಬ್ರೈಟ್ ನೆಸ್ ಗಾಗಿ ಹೊಂದಾಣಿಕೆ ಮಾಡುವ ಸ್ಲೈಡರ್ ತೆರೆದುಕೊಳ್ಳುತ್ತದೆ.

6.ಫ್ಲ್ಯಾಶ್ ಲೈಟ್ ನ ಬ್ರೈಟ್ ನೆಸ್ ಲೆವೆಲ್ ನ್ನು ಸೆಟ್ ಮಾಡಲು ಪ್ರತಿ ಲೆವೆಲ್ ನ್ನು ಟ್ಯಾಪ್ ಮಾಡಿ ಸೆಟ್ ಮಾಡಿಕೊಳ್ಳಿ.

ಬ್ರೈಟ್ ನೆಸ್ ಕಂಟ್ರೋಲ್ ಮಾಡುವ ಹಂತಗಳು :

ಐಫೋನ್ ಎಕ್ಸ್ , ಐಫೋನ್ ಎಕ್ಸ್ಎಸ್, ಐಫೋನ್ ಎಕ್ಸ್ಎಸ್ ಮ್ಯಾಕ್ಸ್ ಮತ್ತು ಐಫೋನ್ ಎಕ್ಸ್ಆರ್

1.ಐಫೋನ್ ನ್ನು ಅನ್ ಲಾಕ್ ಮಾಡಿ

2.ಮೇಲ್ಬಾಗದ ಬಲಗಡೆ ಸ್ವೈಪ್ ಮಾಡಿ ಮತ್ತು ಫೋನಿನ ಕಂಟ್ರೋಲ್ ಸೆಂಟರ್ ನ್ನು ಆಕ್ಸಿಸ್ ಮಾಡಿ.

3.ಫ್ಲ್ಯಾಶ್ ಲೈಟ್ ಟಾಗಲ್ ನ್ನು ನೋಡಿ ಮತ್ತು ಆನ್ ಮಾಡಿ.

4.ಬ್ರೈಟ್ ನೆಸ್ ಸ್ಲೈಡರ್ ಸಿಗಲು ಲಾಂಗ್ ಪ್ರೆಸ್ ಮಾಡಿ ಟಾಗಲ್ ಮಾಡಿ.

5.ಅಗತ್ಯತೆಗೆ ತಕ್ಕಂತೆ ಫ್ಲ್ಯಾಶ್ ಲೈಟ್ ಬ್ರೈಟ್ ನೆಸ್ ಲೆವೆಲ್ ನ್ನು ಟ್ಯಾಪ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ
To stay updated with latest technology news & gadget reviews, follow GizBot on Twitter, Facebook, YouTube and also subscribe to our notification.
Allow Notifications
You have already subscribed

Let’s block ads! (Why?)

Facebook Comments
Close Menu