ಪೂರ್ವ ಅಥವಾ ಉತ್ತರ ದಿಕ್ಕಿಗೆ ಕುಳಿತುಕೊಂಡೇ ಪೂಜೆ ಮಾಡುವುದರ ಉದ್ದೇಶವೇನು?
ಪೂರ್ವ ಅಥವಾ ಉತ್ತರ ದಿಕ್ಕಿಗೆ ಕುಳಿತುಕೊಂಡೇ ಪೂಜೆ ಮಾಡುವುದರ ಉದ್ದೇಶವೇನು?

ನಮ್ಮ ಹಿರಿಯರು ನಾವು ಮಾಡುವ ಪೂಜೆ ಪುನಸ್ಕಾರಗಳನ್ನು ಒಂದು ನಿರ್ದಿಷ್ಟ ದಿಕ್ಕಿಗಳಲ್ಲಿಯೇ ಕುಳಿತು ಮಾಡಬೇಕು ಎಂದಿದ್ದಾರೆ ಅದಕ್ಕೆ ಕಾರಣವೂ ಇದೆ   ಪೂರ್ವ ದಿಕ್ಕು ಐಶ್ವರ್ಯದ ಸಂಕೇತ, ಪೂರ್ವ ಸೂರ್ಯನು ಉದಯಿಸುವ ದಿಕ್ಕು, ಸೂರ್ಯನನ್ನು ಪ್ರತ್ಯಕ್ಷ ದೇವತೆಯೆಂದು ಭಾವಿಸಲಾಗಿದೆ.
ಇವನು ಬೆಳಕಿನ ಅಧಿದೇವತೆ. ಆದರೆ ಸೂರ್ಯನ ಬೆಳಕು ಕೇವಲ ಬೆಳಕಲ್ಲ ಅದು ಭೂಮಿಗೆ ಬೇಕಾದ ಎಲ್ಲಾ ವಸ್ತುಗಳನ್ನು ಒದಗಿಸಿಕೊಡುತ್ತದೆ. ಸೂರ್ಯನಲ್ಲಿ ಒಂದು ಅದ್ಬುತ ಹಾಗು ರಹಸ್ಯ ಶಕ್ತಿ ಇದೆ. ಅವನು ಸಕಲ ಜೀವಿಗಳಿಗೂ ಚೈತನ್ಯದಾಯಕ.
ಜೀವನದ ಉತ್ಕರ್ಷ, ಬೆಳವಣಿಗೆ, ಸಂತೋಷ ಎಲ್ಲಕ್ಕೂ ಇವನೇ ಕಾರಣ.

ಸೃಷ್ಟಿಯಲ್ಲಿ ಸೂರ್ಯನಿಗಿಂತ ತೇಜೋಮಯವಾದದ್ದು ಮತ್ತೊಂದಿಲ್ಲ. ಇಂದ್ರಿಯ ನಿಗ್ರಹಣ, ಮಾನಸಿಕ ಸಂಯಮ, ಏಕಾಗ್ರತೆ,
ಬುದ್ಧಿಶಕ್ತಿ, ಆರೋಗ್ಯ ಎಲ್ಲವನ್ನೂ ಸೂರ್ಯನಿಂದ ಪಡೆಯಬಹುದು ಎಂದು ವೇದಗಳು ಹೇಳಿವೆ.
ಉತ್ತರ ದಿಕ್ಕು ಜ್ಞಾನದ ಸಂಕೇತ, ದೇವತೆಗಳಿಗೆ ಬೇಕಾಗುವ ಯಜ್ಞ ವಸ್ತುಗಳು, ಜ್ಞಾನ ಸಂಪದ ಉತ್ತರ ದಿಕ್ಕಿನಲ್ಲಿರುವ ಹಿಮಾಲಯ ಪರ್ವತದಲ್ಲಿದೆ.
ಅದಕ್ಕೆ ಆ ಪರ್ವತವನ್ನು ಕಾಳಿದಾಸ ‘ದೇವತಾತ್ಮ’ ಎಂದಿದ್ದಾನೆ ಋಷಿಮುನಿಗಳ ಆವಾಸಸ್ಥಾನವೇ ಹಿಮಾಲಯ ಪರ್ವತ.
ಉತ್ತರ ದಿಕ್ಕಿನಲ್ಲಿರುವ ಕೈಲಾಸ ಶಿವನ ವಾಸಸ್ಥಾನ. ಶಿವನು ಜ್ಞಾನ ಪ್ರಸಾದ ಮೂರ್ತಿ.

ಹೀಗೆ ಈ ಎರಡು ದಿಕ್ಕುಗಳು ಪ್ರಶಸ್ತ ದಿಕ್ಕುಗಳು. ದಕ್ಷಿಣ ಯಮನ ದಿಕ್ಕು ಮತ್ತು ಪಶ್ಚಿಮ ಸೂರ್ಯನು ಅಸ್ತಂಗತನಾಗುವ ದಿಕ್ಕು.ಈಗ ನಾವು ಅಂತರಿಕ್ಷದಲ್ಲಿ ಕಲ್ಪಿತ ಉಪಗ್ರಹಗಳ ( satellites ) ಮೂಲಕ ಮಾಹಿತಿಯನ್ನು ನಮ್ಮ ಮನೆಯಲ್ಲಿ ಪಡೆದುಕೊಳ್ಳಬೇಕಾದರೆ
ಆ ಉಪಗ್ರಹಗಳ ಅಕ್ಷಾ೦ಶ-ರೇಖಾ೦ಶಗಳಿಗೆ ಅನುಗುಣವಾಗಿ ನಮ್ಮ ಮನೆಯ ಆಂಟೆನಾ ಅಥವಾ ಡಿಷ್ ( dish ) ಅನ್ನು ಸಿದ್ಧಪಡಿಸಿಕೊಳ್ಳಬೇಕು.
ಇದೇ ವಿಧದಲ್ಲಿ ನಾವು ಪೂಜೆಯನ್ನು ಮಾಡುವಾಗ ಪೂರ್ವ ಅಥವಾ ಉತ್ತರ ದಿಕ್ಕಿಗೆ ಅಭಿಮುಖವಾಗಿ ಕುಳಿತುಕೊಂಡರೆ ಆ ಒಳ್ಳೆಯ ದಿಕ್ಕುಗಳಿಂದ
ನಮಗೆ ಸತ್ಪ್ರಚೋದನೆ, ಶುಭಸ್ಪಂದನ ಎಲ್ಲವೂ ಲಭ್ಯವಾಗುತ್ತದೆ.

ಗ್ರಂಥ ಋಣ: ಪ್ರೊ ಲಲಿತಾಂಬ ಚಂದ್ರಶೇಖರ್
ಸಂಗ್ರಹ: ClearCritique

Facebook Comments
Close Menu